Skip to main content

ಆಹಾರವೇ ಔಷಧವಾಗಲಿ ಔಷಧ ಆಹಾರವಲ್ಲ

 ಆಹಾರವೇ  ಔಷಧವಾಗಲಿ, ಔಷಧ ಆಹಾರವಲ್ಲ..

           ಮಾಹಿತಿ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಪರಮಾಣು ಶಕ್ತಿ, ಬಾಹ್ಯಾಕಾಶ ಕ್ಷೇತ್ರ ವೈಮಾನಿಕ ಕ್ಷೇತ್ರ ಸೇರಿದಂತೆ ಪ್ರಮುಖ ರಂಗಗಳಲ್ಲಿ ಭಾರತವು ಅಮೆರಿಕ, ಬ್ರಿಟನ್, ಚೀನಾದಂಥ ಪ್ರಬಲ ರಾಷ್ಟ್ರಗಳೊಂದಿಗೆ ಸ್ಪರ್ಧೆ ಮಾಡುತ್ತಿದೆ ಎಂಬುದು ಹೆಮ್ಮೆಯ ವಿಷಯವೇ. ಆದರೆ, ಅಪೌಷ್ಟಿಕತೆ ವಿಷಯ ಬಂದಾಗ ಜಗತ್ತಿನ ಬಡ ಮತ್ತು ಸಣ್ಣ ದೇಶಗಳೊಂದಿಗೆ ಸ್ಪರ್ಧೆ ಮಾಡಬೇಕಾದ ದುಸ್ಥಿತಿ.






ಆಹಾರಕ್ಕೆ ಸಂಬಂಧಿಸಿ ಭಾರತದಲ್ಲಿ ಇರುವಷ್ಟು ವೈವಿಧ್ಯಗಳು ಬೇರೆಲ್ಲಿಯೂ ಇರಲಾರವೇನೋ. ನಮ್ಮಲ್ಲಿ ಪರಸ್ಪರ ಭೇಟಿಯ ವೇಳೆ ಮೊದಲು ಕೇಳುವ ಪ್ರಶ್ನೆಯೇ 'ತಿಂಡಿ ಆಯ್ತಾ? ಊಟ ಆಯ್ತಾ?” ಎಂದು ಗೃಹಿಣಿಯರಾದರೆ, "ಏನು ಅಡುಗೆ ಮಾಡುತ್ತೀರಿ? ಇವತ್ತಿನ ವಿಶೇಷ ಏನು? ಎಂದು ವಿಚಾರಿಸುದುಂಟು. ಸಂತೋಷದ ವಿಷಯವೆಂದರೆ  ಹೊಸ ಪೀಳಿಗೆಯ ಯುವಕ ಯುವತಿಯರು ಅಡುಗೆ  ಕಲಿಯಲು ಆಸಕ್ತಿ ತೋರಿ, ಆ ನಿಟ್ಟಿನಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಬಳುವಳಿಯಾಗಿ ಬಂದಿವೆ. ಹಾಗಾಗಿಯೇ ನಮ್ಮ ಪಾಕಶಾಸ್ತ್ರ ಶ್ರೀಮಂತವಾಗಿದೆ. ಯಾವುದೇ ವಸ್ತು ತೆಗೆದುಕೊಂಡರೂ ಅದರಿಂದ ಸಿಹಿ ಪದಾರ್ಥ ಅಥವಾ ಖಾರದ ಖಾದ್ಯ ತಯಾರಿಸುವುದು ಹೇಗೆ ಎಂದು ಹಿರಿಯರು ಪಟಪಟನೆ ಹೇಳುತ್ತಾರೆ. ಋತುಮಾನಕ್ಕೆ ತಕ್ಕಂತೆ, ರುಚಿಗೆ ತಕ್ಕಂತೆ ಸ್ಥಳೀಯ ಹವಾಮಾನಕ್ಕೆ ಪೂರಕವಾಗಿ, ಕೆಲಸ/ವೃತ್ತಿಗೆ ಅನುಗುಣವಾಗಿ ಆಹಾರಪದ್ಧತಿಯನ್ನು ನಮ್ಮ ಹಿರಿಯರು ಹಾಕಿಕೊಟ್ಟಿದ್ದಾರೆ. ಇದು ಪರಂಪರೆಯಾಗಿಯೇ ಬೆಳೆದುಬಂದಿದೆ. 
ಜಗತ್ತಿನಲ್ಲಿ ಆಹಾರ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರಗಳ ಪೈಕಿ ಭಾರತವೂ ಒಂದು. ಆದರೆ, ಪೌಷ್ಟಿಕಾಂತ ಸೂಚ್ಯಂಕದಲ್ಲಿ ಬಾಂಗ್ಲಾದೇಶ, ಪಾಕಿಸ್ತಾನಕ್ಕಿಂತ ಹಿಂದೆ ಇದ್ದೇವೆ. ವಿದೇಶಗಳಿಗೆ ಹಾಲು, ಆಹಾರಧಾನ್ಯಗಳನ್ನು ರವು ಮಾಡುವಷ್ಟರ ಮಟ್ಟಿಗೆ ಉತ್ಪಾದನೆ ಹೆಚ್ಚಿರುವಾಗ ಭಾರತದಲ್ಲಿ ಇಂಥ ಸ್ಥಿತಿ ಏಕೆ? ಶೇಕಡ 30ರಷ್ಟು ಜನರು ಹಸಿವು ಅಥವಾ ಅನೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅಂದರೆ, ಒಂದು ಕಡೆ ಅಧಿಕ ಆಹಾರ ಉತ್ಪಾದನೆ. ಮತ್ತೊಂದೆಡೆ ನೀಗಿಸಲಾಗದ ಅಪೌಷ್ಟಿಕತೆ. ಈ ಸಮಸ್ಯೆ, ಗೋಜಲನ್ನು ಹೇಗೆ ಬಗೆಹರಿಸುವುದುತಿಈ ನಿಟ್ಟಿನಲ್ಲಿ ಚರ್ಚೆಸಿ, ಪರಿಹಾರದ ಹಾದಿ ಕಂಡುಕೊಳ್ಳಲು ಅನಂತಕುಮಾರ್ ಪ್ರತಿಷ್ಠಾನದಿಂದ 'ದೇಶ ಮೊದಲು' ವೆಬಿನಾರ್ ಸಂವಾದ ಸರಣಿಯಲ್ಲಿ 'ಭಾರತದಲ್ಲಿ ಅಪೌಷ್ಠಿಕತೆ ಮತ್ತು ಹಸಿವು' ವಿಷಯದ ಬಗ್ಗೆ ತಜ್ಞರು ಇತ್ತೀಚೆಗೆ ಮಹತ್ವದ ವಿಷಯಗಳನ್ನು ಮಂಡಿಸಿದರು. ಆದಮ್ಮ ಚೇತನ ಸಂಸ್ಥೆ ಕೂಡ ವಿಶೇಷ ಅಭಿಯಾನ ಆರಂಭಿಸಿದೆ. ಈ 'ಪೌಷ್ಟಿಕ-ಸಾತ್ವಿಕ ಆಹಾರ ಅಂದೋಲನ'ದ ಉದ್ದೇಶ ಪೌಷ್ಟಿಕ-ನಾಸ್ತಿಕ ಆಹಾರದ ಬಗ್ಗೆ ಅರಿವು ಮೂಡಿಸುವುದು ಹಾಗೂ ಪ್ರತಿಯೊಬ್ಬರಿಗೂ ಈ ಅಪಾರ ಲಭ್ಯವಾಗುವ ಕೆಲಸ ಮಾಡುವುದು. ಈ ಆಂದೋಲನದಡಿಯಲ್ಲಿ ರಾಗಿ, ಸಾಮೆ, ನವಣೆ, ಆಗಸೆ, ಬೆಲ್ಲವನ್ನು ಒಳಗೊಂಡ ದಿನಸಿ ಪೊಟ್ಟಣ ತಯಾರಿಸಲಾಗಿದ್ದು, ಸದಸ್ಯರಿಗೆ ಅಷ್ಟೆ ಅಲ್ಲದೆ, ಇದನ್ನು ಆಯ್ದ ಸರ್ಕಾರಿ ಶಾಲೆಗಳಿಗೆ ವಿತರಿಸಲು ನಿರ್ಧರಿಸಲಾಗಿದೆ. 
ವೈರುಧ್ಯದ ಸ್ಥಿತಿ: ಆಹಾರ ಉತ್ಪಾದನೆಯ ವಿಷಯದಲ್ಲಿ ಭಾರತ ಕಳೆದ 40 ವರ್ಷಗಳಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ಇಡೀ ಜಗತ್ತಿನ ಶೇಕಡ 25ರಷ್ಟು ಆಹಾರಧಾನ್ಯವನ್ನು ಭಾರತ ಉತ್ಪಾದನೆ ಮಾಡುತ್ತಿದೆ. 1950ರಲ್ಲಿ ಸುಮಾರು 500 ಲಕ್ಷ ಟನ್ಗಳಷ್ಟು ಆಹಾರ ಉತ್ಪಾದನೆ ಆಗುತ್ತಿತ್ತು. ನಂತರ ಬಂದ ಹಸಿರು ಕ್ರಾಂತಿಯ ಪರಿಣಾಮ 1990ರ ದಶಕದಲ್ಲೇ ಆಹಾರ ಉತ್ಪಾದನೆ 1,760 ಲಕ್ಷ ಟಸ್‌ಗಳಿಗೆ ಏರಿತು. 2020ರಲ್ಲಿ 2,750 ಲಕ್ಷ ಟನ್ ಆಹಾರ ಉತ್ಪಾದನೆಯಾಗಿದ್ದು, ದಾಖಲೆಯೇ ಸರಿ. ಈ ವರ್ಷದಲ್ಲಿ ಇದನ್ನು 3 ಸಾವಿರ ಲಕ್ಷ ಟನ್‌ ಸ್‌ಗಳಿಗೆ ಗಳಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಅಂದರೆ ಕಳೆದ ಐವತ್ತು ವರ್ಷಗಳಲ್ಲಿ ಆಹಾರ ಉತ್ಪಾದನೆ ಪ್ರಮಾಣವನ್ನು ಐದಾರು ಪಟ್ಟು ಹೆಚ್ಚಿಸಿಕೊಂಡಿದ್ದೇವೆ. ಹಾಲು, ಕಾಳು ಸೇರಿ ಹಲವು ದವಸಧಾನ್ಯಗಳನ್ನು ರಫ್ತು ಮಾಡುತ್ತಿದ್ದೇವೆ. ಇವೆಲ್ಲವೂ ಭರವಸೆ ಮೂಡಿಸುವ ಸಂಗತಿಗಳೇ. ಆದರೆ, ಇದೇ ಹೊತ್ತಲ್ಲಿ ಅಪಸವ್ಯಗಳನ್ನೂ 
ಗಮನಿಸಬೇಕು. ಒಂದು ವರದಿಯ ಪ್ರಕಾರ ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ಆಹಾರದಲ್ಲಿ ಶೇಕಡ 40ರಷ್ಟನ್ನು ಪೋಲು ಮಾಡಲಾಗುತ್ತಿದೆ! ಮನೆಯ ಊಟದ ತಟ್ಟೆಯಲ್ಲಿ ಬಿಡುವ ಅನ್ನದ ಅಗುಳಿನಿಂದ ಹಿಡಿದು. ಕಾರ್ಯಕ್ರಮಗಳಲ್ಲಿ ಪೋಲಾಗುವ ಊಟದವರೆಗೆ... ಆದರೆ ಹೆಚ್ಚು ಪೋಲಾಗುತ್ತಿರುವುದು ನಮ್ಮ ಶೇಖರಣೆ ಹಾಗೂ ಸಾಗಾಣಿಕೆ ವ್ಯವಸ್ಥೆಯಲ್ಲಿ ಎಂಬುದು ಕಹಿವಾಸ್ತವ. ಸರಿಯಾದ ನಿರ್ವಹಣೆ ಇಲ್ಲದಿರುವುದು, ಭ್ರಷ್ಟಾಚಾರ, ನಿಷ್ಕಾಳಜಿ- ಹೀಗೆ ಕಾರಣಗಳು ಹಲವು. 
ಮಹಿಳೆ, ಮಕ್ಕಳಲ್ಲಿ ಅಪೌಷ್ಟಿಕತೆ: ಭಾರತದ ಶೇಕಡ 30ರಷ್ಟು ಜನರು ಅಪೌಷ್ಠಿಕತೆ ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲೂ ಶೇಕಡ 50 ಮಹಿಳೆಯರು ಮತ್ತು ಶೇಕಡ 60 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ಕೇವಲ ಬಡವರನ್ನು ಕಾಡುತ್ತಿದೆ ಎಂದರೆ ನಿಮ್ಮ ಊಹೆ ತಪ್ಪು. ಈಗಿನ ಆಹಾರ ಪದ್ಧತಿಯಿಂದಲಾಳ್ಳವರು ಕೂಡ ಅಪೌಷ್ಟಿಕತೆ ಸಮಸ್ಯೆ ಎದುರಿಸುತ್ತಿದ್ದಾರೆ. ಆಹಾರವೇ ದೇಹಕ್ಕೆ ಔಷಧ ಎಂಬಂತೆ ಸ್ವೀಕರಿಸುವ ಕ್ರಮ ನಮ್ಮಲ್ಲಿತ್ತು ಅದರಿಗ ಎಲ್ಲವೂ ಎರುಪೇರಾಗಿದೆ. ಆಹಾರ ಪದ್ಧತಿ ಗಣನೀಯವಾಗಿ ಬದಲಾಗಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಮಧುಮೇಹಿಗಳನ್ನು ಹೊಂದಿರುವ ರಾಷ್ಟ್ರ ಭಾರತವಾಗಿದೆ. ರಕ್ತದೊತ್ತಡ, ಹೃದಯಸಂಬಂಧಿ ಕಾಯಿಲೆಗಳು, ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಕ್ಯಾನ್ಸರ್ ರೋಗ ಸನ್ಮಾಪಾರಿಗಳಲ್ಲೇ ಹೆಚ್ಚಾಗಿ ಕಂಡುಬರುತ್ತಿರುವುದು ಅಚ್ಚರಿಯ ಸಂಗತಿ. ಇದಕ್ಕೇನು ಕಾರಣ ಎಂಬುದನ್ನು ತಜ್ಞವೈದ್ಯರೇ ಸ್ಪಷ್ಟಪಡಿಸಬೇಕಿದೆ. 
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಪರಮಾಣು ಶಕ್ತಿ, ಬಾಹ್ಯಾಕಾಶ ಕ್ಷೇತ್ರ ವೈಮಾನಿಕ ಕ್ಷೇತ್ರ ಸೇರಿದಂತೆ ಪ್ರಮುಖ ರಂಗಗಳಲ್ಲಿ ಭಾರತವು ಅಮೆರಿಕ, ಬ್ರಿಟನ್, ಚೀನಾದಂಥ ಪ್ರಬಲ ರಾಷ್ಟ್ರಗಳೊಂದಿಗೆ ಸ್ಪರ್ಧೆ ಮಾಡುತ್ತಿದೆ ಎಂಬುದು ಹೆಮ್ಮೆಯ ವಿಷಯವೇ. ಆದರೆ, ಅಪೌಷ್ಟಿಕತೆ ವಿಷಯ ಬಂದಾಗ ಜಗತ್ತಿನ ಬಡ ಮತ್ತು ಸಣ್ಣ ದೇಶಗಳೊಂದಿಗೆ ಸ್ಪರ್ಧೆ ಮಾಡಬೇಕಾದ ದುಸ್ಥಿತಿ, 2016ರಲ್ಲಿ ಪ್ರಕಟವಾದ ಅಪೌಷ್ಟಿಕತೆ/ಸೂಚ್ಯಂಕ 130 ರಾಷ್ಟ್ರಗಳಿವೆ. ಅವುಗಳಲ್ಲಿ ಭಾರತಕ್ಕೆ 114ನೇ ಸ್ಥಾನ! ಪಾಕಿಸ್ತಾನ, ಬಾಂಗ್ಲಾದೇಶವನ್ನು ಕೂಡ ಇನ್ನೂ ಹಿಂದಿಕ್ಕಲು ಸಾಧ್ಯವಾಗಿಲ್ಲ ಎಂದರೆ ಸ್ಥಿತಿ ಎಷ್ಟು ಶೋಚನೀಯವಾಗಿದೆ! ಇದಕ್ಕೆ ಕಾರಣ ಏನು? ಎಲ್ಲಿ ಎಡವಿದ್ದೇವೆ? ಈಗಾಗಲೇ ಹಲವು ವಿಶ್ವವಿದ್ಯಾಲಯಗಳು, ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಸಂಶೋಧನೆ ನಡೆಸುತ್ತಿವೆ. ಆದರೆ, ವೈಯಕ್ತಿಕವಾಗಿ ಏನು ಮಾಡಬಹುದು ಎಂಬುದರ ಬಗ್ಗೆಯೂ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಅವಶ್ಯಕತೆಯಿದೆ. 
ಅಪೌಷ್ಠಿಕತೆ ಸಮಸ್ಯೆ ಸಿರಿವಂತರನ್ನೂ ಕಾಡುತ್ತಿರುವುದಕ್ಕೆ ಕಾರಣ ನಾವುಗಳೇ ಅಳವಡಿಸಿಕೊಂಡಿರುವ ಜೀವನಶೈಲಿ. ಎಲ್ಲದಕ್ಕೂ ಗಡಿಬಿಡಿ, ಕರಾತುರಿ. ಇಡೀ ದಿನ ಧಾವಂತದಲ್ಲೇ ಕಳೆದುಹೋಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳಿಗೆ ಪೌಷ್ಠಿಕಾಂಶವುಳ್ಳ ಬಿಸಿಯೂಟ ಸಿಗುತ್ತಿದೆ. ಆದರೆ, ಖಾಸಗಿ ಶಾಲೆಗಳ ಆಂಗ್ಲ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳಿಗೆ ಪೌಷ್ಠಿಕಾಂಶವೂ ಸಿಗುತ್ತಿಲ್ಲ. ಬಿಸಿಯೂಟವೂ ಲಭ್ಯವಾಗುತ್ತಿಲ್ಲ. ಬೆಳಗಿನ ಜಾವವೇ ಮನೆ ಬಿಟ್ಟು ಸ್ಕೂಲ್ ವ್ಯಾನ್ ಹತ್ತುವ ಈ ಮಕ್ಕಳು ಬಾಕ್‌ಲ್ಲಿ ಬ್ರೆಡ್ ಅಥವಾ ಬಸ್‌ನಂಥ ತಿಂಡಿಯನ್ನು, ಇಲ್ಲವೆ ಉಪ್ಪಿಟ್ಟು ಅಥವಾ ಚಪಾತಿಯಂಥ ಖಾದ್ಯವನ್ನು ತೆಗೆದುಕೊಂಡು ಹೋಗುತ್ತಾರೆ. 
ಇವು ಸಮತೋಲಿತ ಆಹಾರ ಉದ್ಯೋಗಕ್ಕೆ ಹೋಗುವ ದಂಪತಿ ತರಾತುರಿಯಲ್ಲಿ ಮಗುವನ್ನು ತಯಾರು ಮಾಡಿ, ಬೆಳಗ್ಗೆ ಏನು ತಯಾರಿಸಲು ಸಾಧ್ಯವೋ ಅದನ್ನೇ ಊಟದ ಡಬ್ಬಿಗೆ ಹಾಕಿಕೊಡುತ್ತಾರೆ. ಇದು ಮಕ್ಕಳ ಕಥೆಯಾದರೆ ದೊಡ್ಡವರ ಗೋಳು ವಿಚಿತ್ರ. ಊಟ ಮಾಡಲು ಚೆಣದಲ್ಲಿ ದುಡ್ಡಿದೆ. ಆದರೆ ಸಮಯವೇ ಇಲ್ಲ. ಎರಡು-ಮೂರು ಬಿಸ್ಕತ್ ತಿಂದು, ಮೇಲೆ ಒಂದಿಷ್ಟು ಕೋಲ್ಡ್ ಡ್ರಿಂಕ್ ಅಥವಾ ಟೀ, ಕಾಫಿ ಕುಡಿದು ಆರೋಗ್ಯ ಹಾಳುಮಾಡಿಕೊಳ್ಳುತ್ತಿರುವ ಅಸಂಖ್ಯ ಜನರು ನಮ್ಮ ನಡುವೆಯೇ ಇದ್ದಾರೆ. ಹೀಗಿರುವಾಗ ಅಪೌಷ್ಟಿಕತೆ ಕಾಡದೆ ? 
ಬದಲಾದ ಆಹಾರಪದ್ಧತಿ, ಸಮಯ ಮತ್ತು ದೊರೆಯದೆ ఇరువుదరిండ ಅಪೌಷ್ಟಿಕತೆಯಿಂದ ತೊಳಲಾಡುತ್ತಿದ್ದೇವೆ. ರೋಗ ನಿರೋಧಕ ಶಕ್ತಿ ಕಳೆದು ಕೊಳ್ಳುತ್ತಿದ್ದೇವೆ. ಅನುಕೂಲತೆಗಳಿದ್ದರೂ, ಭಾರತ ಭೂಮಿ ಸಕಲ ಸೌಲಭ್ಯಗಳನ್ನು ಕಲ್ಪಿಸಿದ್ದರೂ ಅದನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯವಾಗದೆ ಒದ್ದಾಡುತ್ತಿದ್ದೇವೆ. 
ನಾವೇನು ಊಟ ಮಾಡುತ್ತಿದ್ದೇವೆ ಅಂದರೆ ಯಾವ ಬಗೆಯ ಆಹಾರ ಸ್ವೀಕರಿಸುತ್ತಿದ್ದೇವೆ ಎಂಬುದನ್ನು ಮತ್ತು ಯಾಕೆ ಊಟ ಮಾಡುತ್ತಿದ್ದೇವೆ ಎಂಬುದನ್ನು ಮುಖ್ಯವಾಗಿ ಅರಿಯಬೇಕು. ಇದರ ಹಿಂದೆ ದೊಡ್ಡ ತತ್ತ್ವಶಾಸ್ತ್ರವೂ ಇದೆ. ಊಟಕ್ಕೆ ಮುಂಚೆ ಒಂದು ಶ್ಲೋಕ ಹೇಳುವುದು ನಮ್ಮಲ್ಲಿ ರೂಢಿಯಲ್ಲಿದೆ. 'ಇಾನ, ವೈರಾಗ್ಯ ಸಿಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತಿ' ಅಂದರೆ 'ಜ್ಞಾನ, ವೈರಾಗ್ಯಪ್ರಾಪ್ತಿಗಾಗಿ ನನಗೆ ಊಟವನ್ನು ಕೊಡು' ಅಂತ. ತೂಕ ಹೆಚ್ಚಿಸಲು ಅಥವಾ ಕಡಿಮೆ ಮಾಡಲು, ರೋಗನಿರೋಧಕ ಶಕ್ತಿ ಹೆಚ್ಚಿಸಲು ಊಟವನ್ನು ನೀಡು ಅಂತ ಅಲ್ಲ, ಅಂದರೆ, ಬರೀ ಹಸಿವು ನಿವಾರಣೆಗಾಗಿ, ಪೌಷ್ಠಿಕತೆ ಪಡೆಯಲು ಊಟವಲ್ಲ, ಇದೆಲ್ಲಕ್ಕಿಂತ ಮುಂದೆ ಹೋಗಿ ಪಾನ, ವೈರಾಗ್ಯಕ್ಕಾಗಿ ಊಟವನ್ನು ಕೊಡು ಎಂದು ಪ್ರಾರ್ಥಿಸುವ ಉದಾತ್ತ ಚಿಂತನೆಯ ದೇಶ ನಮ್ಮದು. 
ಭಗವದ್ಗೀತೆಯಲ್ಲೂ ಒಂದು ಶ್ಲೋಕ ಬರುತ್ತದೆ- 'ಯಾರು ತನಗೊಬ್ಬನೇ  ಅನ್ನವನ್ನು ಹಸಿದ ಒಬ್ಬರಿಗಾದರೂ ದಾನ ಮಾಡಿ ತಾನು ಊಟ ಮಾಡಬೇಕು ಎಂಬ ಚಿಂತನೆಯನ್ನು ಪರೋಪಕಾರದ ಗುಣವನ್ನು ನಮ್ಮ ಹಿರಿಯರು ನೀಡಿದ್ದಾರೆ. ವಿಶೇಷವಾಗಿ ಕೋವಿಡ್ ಸಂದರ್ಭದಲ್ಲಿ ಈ ಪ್ರಕ್ರಿಯೆ ಮತ್ತಷ್ಟು ಜೀವಂತಿಕೆ ಪಡೆದುಕೊಂಡಿದೆ. 
ಸಮಸ್ಯೆಯ ಮೂಲ ಎಲ್ಲಿದೆ?: ಸಮತೋಲಿತ ಆಹಾರದ ಕಡೆಗೆ ನಿರ್ಲಕ್ಷ್ಯ ವಹಿಸುತ್ತಿದ್ದೇವೆ. ಹೆಚ್ಚು ರಾಸಾಯನಿಕಗಳನ್ನು ಬಳಸಿ ಆಹಾರಧಾನ್ಯಗಳನ್ನು ಉತ್ಪಾದಿಸುತ್ತಿದ್ದೇವೆ. ಭೂಮಿಯ ಫಲವತ್ತತೆಯನ್ನು ಹಾಳು ಮಾಡುವ ಆಹಾರವನ್ನೇ ಸ್ವೀಕರಿಸುತ್ತಿದ್ದೇವೆ. ರೈತರು ಇದನ್ನೇ ಬೆಳೆಯುತ್ತಿದ್ದು, ಸರ್ಕಾರ ವಿತರಣೆ ಮಾಡುತ್ತಿದೆ. ಈ ವಿಷವರ್ತುಲದಿಂದ ಹೊರಬರಬೇಕಾದರೆ ಸ್ಥಳೀಯ ಸಿರಿಧಾನ್ಯಗಳನ್ನು (ರಾಗಿ, ಜೋಳ, ನವಣೆ, ಸಾಮೆ) ಹೆಚ್ಚಾಗಿ ಬಳಸಬೇಕು. ಕಾಳುಗಳನ್ನು ತರಕಾರಿಗಳನ್ನು ಹಾಗೂ ಸೂಕ್ತವಾದ ಮಸಾಲೆಗಳನ್ನು ಬಳಸಿ ನಮ್ಮ ಆಹಾರವನ್ನು ಔಷಧವಾಗೊ ರೋಗ ನಿರೋಧಕ ಚುಚ್ಚುಮದ್ದಾಗಿ ಪರಿವರ್ತನೆ ಮಾಡಿಕೊಳ್ಳೋಣ. ಸಮತೋಲಿತ ಆಹಾರ ಸ್ವೀಕರಿಸುವ ಮೂಲಕ ಅಪೌಷ್ಠಿಕತೆ ಸಮಸ್ಯೆಗೆ ಪರಿಹಾರ ಮಾತ್ರವಲ್ಲದೆ ಆರೋಗ್ಯಯುತ ಸಮಾಜವನ್ನೂ ನಿರ್ಮಿಸೋಣ.

Comments

Popular posts from this blog

ಮನೆಯಿಂದಲೆ ಮಾಡಿ ಕೆಲಸ

 ಉದ್ಯೋಗ ಐಡಿ:20W70-1452100405437J ಸಂಬಳ:(₹) 22500 - 26500 (ಮಾಸಿಕ) ಹುದ್ದೆಗಳ ಸಂಖ್ಯೆ: 112 ಪೋಸ್ಟ್ ಮಾಡಿದ ದಿನಾಂಕ:15/04/2025 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:30/04/2025 ಕಂಪನಿಯ ಹೆಸರು: SD ಸಮತಾ ನಗರ್ ಪ್ರಾಪರ್ಟಿ ಮೆಂಟೆನೆನ್ಸ್ ಪ್ರೈವೇಟ್ ಲಿಮಿಟೆಡ್ ಕೆಲಸದ ಶೀರ್ಷಿಕೆ ಮನೆಯಿಂದ ಅತ್ಯುತ್ತಮ ಕೆಲಸ ಉದ್ಯೋಗ ಟೈಪಿಂಗ್ ಡೇಟಾ ಎಂಟಿ ಉಚಿತವಲ್ಲ ಉದ್ಯೋಗ ಒಂದು ಸಾವಿರದ ಐವತ್ತು ಈ ಪೋಟಲ್ ಅನ್ನು ಪರಿಶೀಲಿಸಲಾಗಿದೆ ಸಂಸ್ಥೆಯ ಪ್ರಕಾರ ಖಾಸಗಿ ವಲಯ ಹಣಕಾಸು ಮತ್ತು ವಿಮೆ ಕ್ರಿಯಾತ್ಮಕ ಪ್ರದೇಶ ಮಾಹಿತಿ ತಂತ್ರಜ್ಞಾನ ಕ್ರಿಯಾತ್ಮಕ ಪಾತ್ರ ಕಂಪ್ಯೂಟರ್ ಆಪರೇಟರ್ ಕೆಲಸದ ವಿವರ ಈ ಖಾಲಿ ಹುದ್ದೆಯನ್ನು ರಾಷ್ಟ್ರೀಯ ವೃತ್ತಿ ಸೇವಾ ಅಧಿಕಾರಿ ಮತ್ತು ಸಾಫ್ಟ್ರೆಕ್ಸ್ ಪ್ರಧಾನ ಮಂತ್ರಿ ಆಯುಷ್ಮಾನ್-ಭಾರತ್ (PMAY) ಯೋಜನೆಯ ಸಹಯೋಗದಲ್ಲಿ ರಚಿಸಿದ್ದಾರೆ. ಮನೆಯಿಂದ ಶಾಶ್ವತ ಕೆಲಸ ಕೆಲಸದ ಸಮಯ: ದಿನಕ್ಕೆ 4 ಗಂಟೆಗಳು, ಹೊಂದಿಕೊಳ್ಳುವ ಸಮಯ ಕೆಲಸದ ದಿನಗಳು: ಸೋಮವಾರದಿಂದ ಶುಕ್ರವಾರದವರೆಗೆ: ಮಾಸಿಕ ಆದಾಯ 23876, ಕೆಲಸದ ಪ್ರಕ್ರಿಯೆ ಮೊದಲು ನೀವು ಟೈಪಿಂಗ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು, ಇದರಲ್ಲಿ ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ಸಲ್ಲಿಸಬೇಕಾದ ನಂತರ ನಾವು ನಿಮ್ಮ ವೇಗವನ್ನು ಅಂದಾಜು ಮಾಡುತ್ತೇವೆ, ಅದು ಸಾಮಾನ್ಯ ದಾಖಲೆ ಆಧಾರ್ ಕಾರ್ಡ್ ಹೈಸ್ಕೂಲ್ ಮತ್ತು ಮಧ್ಯಂತರ ಮಾರ್ಕೆಟ್‌ಶೀಟ್ ಮತ್ತು ಒಂದು ಪಾಸ್‌ಪೋರ್ಟ್ ಗಾತ್ರದ ಫೋಟೋ...

ಅಪರೂಪದ ಕಾಯಿಲೆಗಳು

          ಅಪರೂಪದ ಕಾಯಿಲೆಗಳು    ನೆಗಡಿ, ಕೆಮ್ಮು, ಜ್ವರ, ತಲೆನೋವುಗಳಂಥ ಸಾಮಾನ್ಯ ಕಾಯಿಲೆಗಳಿಲ್ಲ. ಮಧುಮೇಹ, ಹೃದ್ರೋಗ, ರಕ್ತದೊತ್ತಡ, ಕ್ಯಾನ್ಸರ್‌ಗಳಂಥ ರೋಗಗಳೂ ಅಲ್ಲ. ಅವು ಎಷ್ಟು ಅಪರೂಪ ಎಂದರೆ ಆ ಕಾಯಿಲೆಗಳ ಹೆಸರನ್ನೇ ನಾವು ಕೇಳಿರುವುದಿಲ್ಲ. ಅಷ್ಟೇ ಏಕೆ ಅವು ಬಹುತೇಕ ವೈದ್ಯರಿಗೂ ಅಪರಿಚಿತ, ತಮಗೇ ಗೊತ್ತಿರದ ಕಾಯಿಲೆಗೆ ಅದು ಹೇಗೆ ಚಿಕಿತ್ಸೆ ಕೊಟ್ಟಾರು?! ಎಲ್ಲೋ ಕೆಲವು ವೈದ್ಯರಿಗೆ ಇಂಥ ಕೆಲವು ಕಾಯಿಲೆಗಳ ಬಗ್ಗೆ ಗೊತ್ತಿರುತ್ತದೆ. ಆದರೂ ಅವುಗಳ ಚಿಕಿತ್ಸೆಗೆ ಔಷರಿಗಳು ಲಭ್ಯ ಇರುವುದಿಲ್ಲ. ಉಪಚಾರ ಇಲ್ಲದ, ಔಷಧಿಗಳಿಲ್ಲದ ಈ ಕಾಯಿಲೆಗಳು ತೀರ ಆನಾಥವೂ ಕೂಡ!       ಯಾವಾಗಲೋ ಒಮ್ಮೆ ಬರುವ ಇಂಥ ರೋಗಿಗಳ ಬಗ್ಗೆ ವೈದರೂ ತಲೆಕೆಡಿಸಿಕೊಳ್ಳುವುದಿಲ್ಲ. ಈ ಕಾಯಿಲೆಗಳಿಗೆ ನೀಡುವ ಔಷಧಿಗಳನ್ನು ಉತ್ಪಾದಿಸಲು ಔಷಧ ಉತ್ಪಾದಕರೂ ಮುಂದೆ ಬರುವುದಿಲ್ಲ. ಹಲವು ಉತ್ಪಾದಕರು  ಉತ್ಪಾದನೆಗೆ ಮುಂದಾದರೂ ಅವುಗಳ ಬೆಲೆ ತೀರಾ ಹೆಚ್ಚು. ಅವು ಸಾಮಾನ್ಯ ಜನರ ಕೈಗೆ ಎಟಕುವುದಿಲ್ಲ.  ಹೆಚ್ಚಾಗಿ ಮಕ್ಕಳನ್ನೇ ಪೀಡಿಸುವ ಈ ಕಾಯಿಲೆಗಳು ಅವರನ್ನು ಎಳೆ ವಯಸ್ಸಿನಲ್ಲಿಯೇ ಅರ್ಜರಿತರನ್ನಾಗಿಸುತ್ತವೆ. ಸರಿಸುಮಾರು ಹತ್ತು ಕಿಲೋ ಭಾರದ ಒಂದು ಮಗುವಿಗೆ. ಪ್ರತಿವರ್ಷ ಎಷ್ಟೋ ಲಕ್ಷದಿಂದ ನಿಂದ ಒಂದು ಕೋಟಿಗೂ ಹೆಚ್ಚು ಹಣವನ್ನು ಚಿಕಿತ್ಸೆಗಾಗಿ ತೆರಬೇಕಾಗುತ್ತದೆ. ಸರಕಾರ, ಸ್ವಯಂಸೇವಾ ಸಂಸ್ಥೆ...