Skip to main content

ಧರೆಯಲ್ಲಿ ಭಗವಂತನ ಮಹತ್ವ ಏನು?

             ಭಗವಂತನ ಕರ್ತವ್ಯ ಏನಾಗಿದೆ

ಧರ್ಮ ಸ್ಥಾಪನೆ ಮಾಡುವುದಕ್ಕಾಗಿ ಶಿವ ಭಗವಾನ್ ತಮ್ಮ ನಿಜವಾದ ನಿವಾಸವಾಗಿರುವ ಪರಮಧಾಮದಿಂದ ಭೂಮಿಯ ಮೇಲೆ ಅವತರಿತರಾಗಿದ್ದಾರೆ. ಯಾವ ಸಮಯದಲ್ಲಿ ಅವರು ಅವತರಣೆ ಮಾಡುತ್ತಾರೆ ? ಕಲಿಯುಗದ ಅಂತ್ಯದಲ್ಲಿ ಅಂದರೆ ಅಧರ್ಮ ಅತಿಯಾದಾಗ ಒಬ್ಬ ಮಾನವ ಏನು ಮಾಡುತ್ತಾನೆ? ಜ್ಞಾನ ರಾಜಯೋಗದ ವಿಧಾನವನ್ನು ತನ್ನ ಮುಖದ ಮೂಲಕ ತಿಳಿಸುತ್ತಾರೆ. ವರ್ತಮಾನ ಸಮಯದಲ್ಲಿ  ಪ್ರಜೆಗಳು ಭಯಭೀತರಾಗಿ ಜೀವನವನ್ನು ಮಾಡುತ್ತಿದ್ದಾರೆ. ಪ್ರಕೃತಿಯ ಆಪತ್ತುಗಳು ಹೆಚ್ಚಾಗಿ ಕಂಡುಬರುತ್ತಿದೆ. ಕುಟುಂಬ ಸಂಬಂಧದಲ್ಲಿ ಸ್ವಾರ್ಥ ಹೆಚ್ಚಾಗಿದೆ. ಮಾನವರಲ್ಲಿ ಅತಿ ಹೆಚ್ಚಾಗಿ ಇಚ್ಛೆಗಳು, ವಿಕಾರಿ ಗುಣಗಳು ವಿಭ್ರಂಭಿಸುತ್ತದೆ. ಆದ್ದರಿಂದ ಅನೇಕ ಭ್ರಷ್ಟಾಚಾರದ ಕೆಲಸಗಳನ್ನು ಮಾಡುತ್ತಿದ್ದಾರೆ. ಎಲ್ಲಿ ನೋಡಿದರಲ್ಲಿ ದುಃಖ, ಅಶಾಂತಿ, ನಿರಾಶೆ,ನಿರುತ್ಸಾಹ, ಭಯದ ಆಂದೋಲನೆಗಳು, ರೋಗದಿಂದ ಕೂಡಿದ ನೋಟಗಳು, ಚಿಂತೆಗಳು, ಭಾದೆಗಳು ಇವೆಲ್ಲವೂ ಕಲಿಯುಗದ ಅಂತಿಮದ ಸೂಚನೆಗಳ. ಅತಿ ಅಂತಿಮಕ್ಕೆ ಸೂಚನೆ. ಸರಿಯಾದ ಇಂತಹ ಸಮಯದಲ್ಲಿ ಭಗವಂತನು ಅವತರನೆ ಮಾಡುತ್ತಾರೆ. 1937ನೇ ಸವ್ವತ್ಸರದಲ್ಲಿ ಭಗವಂತನು ಅವತರಿತರಾಗಿದ್ದಾರೆ. ಅಂದರೆ, ಭಗವಂತ ಬರುವವವರೆಗೂ ಸೃಷ್ಟಿಯಲ್ಲಿ ಅಧರ್ಮವಿದೆ. ಆದರೆ ಅತಿಯಾಗಿರಲಿಲ್ಲ. ಅಂದರೆ ಸ್ವಯಂ ಭಗವಂತನು ಬರಲಿಲ್ಲ. ಆದರೆ ಸಮಯಕ್ಕೆ ಅನುಸಾರವಾಗಿ ಧರ್ಮಪಿತರನ್ನು ಅಂದರೆ ಧರ್ಮ ಪ್ರಚಾರವನ್ನು ಮಾಡುವುದಕ್ಕೋಸ್ಕರ ಕ್ರೈಸ್ತ, ಮಹಮ್ಮದ್, ಬುದ್ಧ, ಗುರುನಾನಕ್ ಅವರನ್ನು ಕಳುಹಿಸುತ್ತಾರೆ. ಇವರ ಮೂಲಕ
ಪ್ರಪಂಚದಲ್ಲಿ ಅನೇಕ ಸಾಮಾನ್ಯ ಮಾನವರು ಧರ್ಮ ಮಾರ್ಗದಲ್ಲಿ ನಡೆದು ಸನ್ಮಾರ್ಗವನ್ನು ಹಿಡಿದರು. ಸೃಷ್ಟಿಯು ಪೂರ್ತಿ ಪತನವಾಗದೆ ಧರ್ಮದ ಪಿತರು ಕಾಪಾಡಿಕೊಂಡು ಬಂದಿದ್ದಾರೆ. ಆದರೆ ಅಧರ್ಮವು ಅತಿಯಾದಾಗ ವರ್ತಮಾನ ಸಮಯದಲ್ಲಿ ಶಿವ ಪರಮಾತ್ಮನು ಅವತರಿತರಾಗಿದ್ದಾರೆ. ನೂತನ ದೈವೀ ರಾಜ್ಯವನ್ನು ಸ್ಥಾಪನೆ ಮಾಡುತ್ತಾರೆ. ಕರ್ತವ್ಯವನ್ನು ಧರ್ಮಪಿತರಾಗಲಿ ಸಾಮಾನ್ಯ  ಮನುಷ್ಯರು ಮಾಡಲು ಸಾಧ್ಯವಿಲ್ಲ. ಇದೇ ಪರಮಾತ್ಮನ ಮಹತ್ವ ಪೂರ್ಣವಾದ ಕರ್ತವ್ಯವಾಗಿದೆ. ಮನುಷ್ಯನ ಆಲೋಚನೆ, ಮಾತು, ಕರ್ಮ, ಈ ಮೂರರಲ್ಲಿ ಧರ್ಮ ತುಂಬಿದ್ದರೆ, ಸೃಷ್ಟಿಯಲ್ಲಿ ಧರ್ಮ ಸ್ಥಾಪನೆ ಆಗುವುದರಲ್ಲಿ ಸಂಶಯವಿಲ್ಲ. ಇಂತಹ ಪರಿವರ್ತನೆಯನ್ನು ಮನುಷ್ಯರಲ್ಲಿ ತರುವುದಕ್ಕೋಸ್ಕರ  ಭಗವಂತನು ಅವತರಣಿಯಾಗಿ ಜ್ಞಾನವನ್ನು ತಿಳಿಸುತ್ತಿದ್ದಾರೆ. "ಜ್ಞಾನ" ಎಂದರೆ ಒಳ್ಳೆಯದು ಮತ್ತು ಕೆಟ್ಟದ್ದನ್ನು ತಿಳಿಸುವಂತಹ, ಶ್ರೇಷ್ಠ ಕರ್ಮವನ್ನು ಮಾಡುವಂತಹ ತಿಳಿವಳಿಕೆಯನ್ನು ಕೊಡುತ್ತದೆ. ವರ್ತಮಾನ ಸಮಯದಲ್ಲಿ ಶ್ರೇಷ್ಠ ಜೀವನವನ್ನು ತಯಾರು ಮಾಡಲು ಜ್ಞಾನವು ಸಹಾಯ ಮಾಡುತ್ತದೆ. ಭೂತ ಕಾಲದಲ್ಲಿ ಮಾಡಿರುವ ವೀಕರ್ಮಗಳನ್ನು ಭಸ್ಮ ಮಾಡಲು ಯೋಗದ ಅವಶ್ಯಕತೆ ಇರುತ್ತದೆ. ಆದ್ದರಿಂದ ಪರಮಾತ್ಮ ಶಿವನು ಧರ್ಮ ಸ್ಥಾಪನೆಯ ಕರ್ತವ್ಯವನ್ನು ಜ್ಞಾನದ ರಾಜಯೋಗದ ಮೂಲಕ ಮಾಡುತ್ತಿದ್ದಾರೆ. ಜ್ಞಾನ ಸ್ನಾನದ ಮೂಲಕ ಆತ್ಮ ಪಾವಣವಾಗುತ್ತದೆ. ಯೋಗಿಗಳಾಗುವ ಮೂಲಕ ಆತ್ಮ ಪವಿತ್ರವಾಗುತ್ತದೆ.
  
x
x


Comments

Popular posts from this blog

ಮನೆಯಿಂದಲೆ ಮಾಡಿ ಕೆಲಸ

 ಉದ್ಯೋಗ ಐಡಿ:20W70-1452100405437J ಸಂಬಳ:(₹) 22500 - 26500 (ಮಾಸಿಕ) ಹುದ್ದೆಗಳ ಸಂಖ್ಯೆ: 112 ಪೋಸ್ಟ್ ಮಾಡಿದ ದಿನಾಂಕ:15/04/2025 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:30/04/2025 ಕಂಪನಿಯ ಹೆಸರು: SD ಸಮತಾ ನಗರ್ ಪ್ರಾಪರ್ಟಿ ಮೆಂಟೆನೆನ್ಸ್ ಪ್ರೈವೇಟ್ ಲಿಮಿಟೆಡ್ ಕೆಲಸದ ಶೀರ್ಷಿಕೆ ಮನೆಯಿಂದ ಅತ್ಯುತ್ತಮ ಕೆಲಸ ಉದ್ಯೋಗ ಟೈಪಿಂಗ್ ಡೇಟಾ ಎಂಟಿ ಉಚಿತವಲ್ಲ ಉದ್ಯೋಗ ಒಂದು ಸಾವಿರದ ಐವತ್ತು ಈ ಪೋಟಲ್ ಅನ್ನು ಪರಿಶೀಲಿಸಲಾಗಿದೆ ಸಂಸ್ಥೆಯ ಪ್ರಕಾರ ಖಾಸಗಿ ವಲಯ ಹಣಕಾಸು ಮತ್ತು ವಿಮೆ ಕ್ರಿಯಾತ್ಮಕ ಪ್ರದೇಶ ಮಾಹಿತಿ ತಂತ್ರಜ್ಞಾನ ಕ್ರಿಯಾತ್ಮಕ ಪಾತ್ರ ಕಂಪ್ಯೂಟರ್ ಆಪರೇಟರ್ ಕೆಲಸದ ವಿವರ ಈ ಖಾಲಿ ಹುದ್ದೆಯನ್ನು ರಾಷ್ಟ್ರೀಯ ವೃತ್ತಿ ಸೇವಾ ಅಧಿಕಾರಿ ಮತ್ತು ಸಾಫ್ಟ್ರೆಕ್ಸ್ ಪ್ರಧಾನ ಮಂತ್ರಿ ಆಯುಷ್ಮಾನ್-ಭಾರತ್ (PMAY) ಯೋಜನೆಯ ಸಹಯೋಗದಲ್ಲಿ ರಚಿಸಿದ್ದಾರೆ. ಮನೆಯಿಂದ ಶಾಶ್ವತ ಕೆಲಸ ಕೆಲಸದ ಸಮಯ: ದಿನಕ್ಕೆ 4 ಗಂಟೆಗಳು, ಹೊಂದಿಕೊಳ್ಳುವ ಸಮಯ ಕೆಲಸದ ದಿನಗಳು: ಸೋಮವಾರದಿಂದ ಶುಕ್ರವಾರದವರೆಗೆ: ಮಾಸಿಕ ಆದಾಯ 23876, ಕೆಲಸದ ಪ್ರಕ್ರಿಯೆ ಮೊದಲು ನೀವು ಟೈಪಿಂಗ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು, ಇದರಲ್ಲಿ ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ಸಲ್ಲಿಸಬೇಕಾದ ನಂತರ ನಾವು ನಿಮ್ಮ ವೇಗವನ್ನು ಅಂದಾಜು ಮಾಡುತ್ತೇವೆ, ಅದು ಸಾಮಾನ್ಯ ದಾಖಲೆ ಆಧಾರ್ ಕಾರ್ಡ್ ಹೈಸ್ಕೂಲ್ ಮತ್ತು ಮಧ್ಯಂತರ ಮಾರ್ಕೆಟ್‌ಶೀಟ್ ಮತ್ತು ಒಂದು ಪಾಸ್‌ಪೋರ್ಟ್ ಗಾತ್ರದ ಫೋಟೋ...

ಆಹಾರವೇ ಔಷಧವಾಗಲಿ ಔಷಧ ಆಹಾರವಲ್ಲ

 ಆಹಾರವೇ  ಔಷಧವಾಗಲಿ, ಔಷಧ ಆಹಾರವಲ್ಲ ..             ಮಾಹಿತಿ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಪರಮಾಣು ಶಕ್ತಿ, ಬಾಹ್ಯಾಕಾಶ ಕ್ಷೇತ್ರ ವೈಮಾನಿಕ ಕ್ಷೇತ್ರ ಸೇರಿದಂತೆ ಪ್ರಮುಖ ರಂಗಗಳಲ್ಲಿ ಭಾರತವು ಅಮೆರಿಕ, ಬ್ರಿಟನ್, ಚೀನಾದಂಥ ಪ್ರಬಲ ರಾಷ್ಟ್ರಗಳೊಂದಿಗೆ ಸ್ಪರ್ಧೆ ಮಾಡುತ್ತಿದೆ ಎಂಬುದು ಹೆಮ್ಮೆಯ ವಿಷಯವೇ. ಆದರೆ, ಅಪೌಷ್ಟಿಕತೆ ವಿಷಯ ಬಂದಾಗ ಜಗತ್ತಿನ ಬಡ ಮತ್ತು ಸಣ್ಣ ದೇಶಗಳೊಂದಿಗೆ ಸ್ಪರ್ಧೆ ಮಾಡಬೇಕಾದ ದುಸ್ಥಿತಿ. ಆಹಾರಕ್ಕೆ ಸಂಬಂಧಿಸಿ ಭಾರತದಲ್ಲಿ ಇರುವಷ್ಟು ವೈವಿಧ್ಯಗಳು ಬೇರೆಲ್ಲಿಯೂ ಇರಲಾರವೇನೋ. ನಮ್ಮಲ್ಲಿ ಪರಸ್ಪರ ಭೇಟಿಯ ವೇಳೆ ಮೊದಲು ಕೇಳುವ ಪ್ರಶ್ನೆಯೇ 'ತಿಂಡಿ ಆಯ್ತಾ? ಊಟ ಆಯ್ತಾ?” ಎಂದು ಗೃಹಿಣಿಯರಾದರೆ, "ಏನು ಅಡುಗೆ ಮಾಡುತ್ತೀರಿ? ಇವತ್ತಿನ ವಿಶೇಷ ಏನು? ಎಂದು ವಿಚಾರಿಸುದುಂಟು. ಸಂತೋಷದ ವಿಷಯವೆಂದರೆ  ಹೊಸ ಪೀಳಿಗೆಯ ಯುವಕ ಯುವತಿಯರು ಅಡುಗೆ  ಕಲಿಯಲು ಆಸಕ್ತಿ ತೋರಿ, ಆ ನಿಟ್ಟಿನಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಬಳುವಳಿಯಾಗಿ ಬಂದಿವೆ. ಹಾಗಾಗಿಯೇ ನಮ್ಮ ಪಾಕಶಾಸ್ತ್ರ ಶ್ರೀಮಂತವಾಗಿದೆ. ಯಾವುದೇ ವಸ್ತು ತೆಗೆದುಕೊಂಡರೂ ಅದರಿಂದ ಸಿಹಿ ಪದಾರ್ಥ ಅಥವಾ ಖಾರದ ಖಾದ್ಯ ತಯಾರಿಸುವುದು ಹೇಗೆ ಎಂದು ಹಿರಿಯರು ಪಟಪಟನೆ ಹೇಳುತ್ತಾರೆ. ಋತುಮಾನಕ್ಕೆ ತಕ್ಕಂತೆ, ರುಚಿಗೆ ತಕ್ಕಂತೆ ಸ್ಥಳೀಯ ಹವಾಮಾನಕ್ಕೆ ಪೂರಕವಾಗಿ, ಕೆಲಸ/ವೃತ್ತಿಗೆ ಅನುಗುಣವಾಗಿ ಆಹಾರಪದ...

ಅಪರೂಪದ ಕಾಯಿಲೆಗಳು

          ಅಪರೂಪದ ಕಾಯಿಲೆಗಳು    ನೆಗಡಿ, ಕೆಮ್ಮು, ಜ್ವರ, ತಲೆನೋವುಗಳಂಥ ಸಾಮಾನ್ಯ ಕಾಯಿಲೆಗಳಿಲ್ಲ. ಮಧುಮೇಹ, ಹೃದ್ರೋಗ, ರಕ್ತದೊತ್ತಡ, ಕ್ಯಾನ್ಸರ್‌ಗಳಂಥ ರೋಗಗಳೂ ಅಲ್ಲ. ಅವು ಎಷ್ಟು ಅಪರೂಪ ಎಂದರೆ ಆ ಕಾಯಿಲೆಗಳ ಹೆಸರನ್ನೇ ನಾವು ಕೇಳಿರುವುದಿಲ್ಲ. ಅಷ್ಟೇ ಏಕೆ ಅವು ಬಹುತೇಕ ವೈದ್ಯರಿಗೂ ಅಪರಿಚಿತ, ತಮಗೇ ಗೊತ್ತಿರದ ಕಾಯಿಲೆಗೆ ಅದು ಹೇಗೆ ಚಿಕಿತ್ಸೆ ಕೊಟ್ಟಾರು?! ಎಲ್ಲೋ ಕೆಲವು ವೈದ್ಯರಿಗೆ ಇಂಥ ಕೆಲವು ಕಾಯಿಲೆಗಳ ಬಗ್ಗೆ ಗೊತ್ತಿರುತ್ತದೆ. ಆದರೂ ಅವುಗಳ ಚಿಕಿತ್ಸೆಗೆ ಔಷರಿಗಳು ಲಭ್ಯ ಇರುವುದಿಲ್ಲ. ಉಪಚಾರ ಇಲ್ಲದ, ಔಷಧಿಗಳಿಲ್ಲದ ಈ ಕಾಯಿಲೆಗಳು ತೀರ ಆನಾಥವೂ ಕೂಡ!       ಯಾವಾಗಲೋ ಒಮ್ಮೆ ಬರುವ ಇಂಥ ರೋಗಿಗಳ ಬಗ್ಗೆ ವೈದರೂ ತಲೆಕೆಡಿಸಿಕೊಳ್ಳುವುದಿಲ್ಲ. ಈ ಕಾಯಿಲೆಗಳಿಗೆ ನೀಡುವ ಔಷಧಿಗಳನ್ನು ಉತ್ಪಾದಿಸಲು ಔಷಧ ಉತ್ಪಾದಕರೂ ಮುಂದೆ ಬರುವುದಿಲ್ಲ. ಹಲವು ಉತ್ಪಾದಕರು  ಉತ್ಪಾದನೆಗೆ ಮುಂದಾದರೂ ಅವುಗಳ ಬೆಲೆ ತೀರಾ ಹೆಚ್ಚು. ಅವು ಸಾಮಾನ್ಯ ಜನರ ಕೈಗೆ ಎಟಕುವುದಿಲ್ಲ.  ಹೆಚ್ಚಾಗಿ ಮಕ್ಕಳನ್ನೇ ಪೀಡಿಸುವ ಈ ಕಾಯಿಲೆಗಳು ಅವರನ್ನು ಎಳೆ ವಯಸ್ಸಿನಲ್ಲಿಯೇ ಅರ್ಜರಿತರನ್ನಾಗಿಸುತ್ತವೆ. ಸರಿಸುಮಾರು ಹತ್ತು ಕಿಲೋ ಭಾರದ ಒಂದು ಮಗುವಿಗೆ. ಪ್ರತಿವರ್ಷ ಎಷ್ಟೋ ಲಕ್ಷದಿಂದ ನಿಂದ ಒಂದು ಕೋಟಿಗೂ ಹೆಚ್ಚು ಹಣವನ್ನು ಚಿಕಿತ್ಸೆಗಾಗಿ ತೆರಬೇಕಾಗುತ್ತದೆ. ಸರಕಾರ, ಸ್ವಯಂಸೇವಾ ಸಂಸ್ಥೆ...