ಅಭಿನಂದನೀಯ ಸನಾತನ ಶೈಲಿ
ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡಿರುವುದು ನಮಗೆಲ್ಲರಿಗೂ ಗೊತ್ತು. ಅಂದಿನಿಂದ ಭಾರತದ ಪ್ರಾಚೀನ ಜೀವನ ಶೈಲಿ, ಆಯುರ್ವೇದ ಸೇರದಂತೆ ವೈದ್ಯಕೀಯ ಪದ್ಧತಿಯು ಮುನ್ನಲೆಗೆ ಬಂದಿದೆ. ಓಲ್ಡ್ ಈಸ್ ಗೋಲ್ಡ್ ಎಂಬ ಮಾತು ಸರಿ ಎಂಬ ಅಭಿಪ್ರಾಯಕ್ಕೆ ಜನ ತಲೆದೂಗುತ್ತಿದ್ದಾರೆ.
ನಿಮ್ಮ ಅಜ್ಜಿ ಪ್ರತೀ ಊಟದ ಮೊದಲು ಕೈಗಳನ್ನು
ಮತ್ತು ಕಾಲುಗಳನ್ನು ತೊಳೆಯಲೇ ಬೇಕೆಂದು ಒತ್ತಾಯಿಸುತ್ತಿದ್ದದ್ದು ನಿಮಗೆ ಇನ್ನೂ ನೆನಪಿರಬಹುದು. ಯಾವುದೇ ಋತುವಾದರೂ ಸರಿ, ಬೆಳಿಗ್ಗೆ ಎದ್ದೊಡನೆಯೇ ಸ್ನಾನ ಮಾಡಬೇಕು. ಬಾಗಿಲ ಹೊರಗೆ ಚಪ್ಪಲಿಯನ್ನು ಬಿಡಬೇಕು. ಇತ್ತೀಚಿನ ದಿನಗಳವರೆಗೂ ಇವೆಲ್ಲವೂ ಹಳೆಯ ಕಾಲದ ಪದ್ಧತಿಗಳು ಎಂದು ಕೊಳ್ಳಲಾಗಿತ್ತು ಆದರೆ ಕೋವಿಡ್-19 ಮಹಾಮಾರಿ ಇಡೀ ಜಗತ್ತನ್ನೇ ಬಡಿದಿರುವುದರಿಂದ ದೀಢೀರೆಂದು ಈ ಎಲ್ಲಾ ಅಭ್ಯಾಸಗಳಿಗೂ ಹೊಸ ಅರ್ಥ ಬಂದಿದೆ. ಭಾರತೀಯ ಶೈಲಿಯಲ್ಲಿ ಅಭಿನಂದಿಸುವ ನಮಸ್ತೆಯನ್ನು ಜಗತ್ತಿನ ಎಲ್ಲಾ ನಾಯಕರೂ ಅನುಸರಿಸಲಾರಂಭಿಸಿದ್ದಾರೆ. ವಿಶ್ವ ಆರೋಗ್ಯಸಂಸ್ಥೆಯ ನಿರ್ದೇಶನದಂತೆ ನಾವೆಲ್ಲರೂ ಇಪ್ಪತ್ತು ಸೆಕೆಂಡುಗಳವರೆಗೆ ಸಾಬೂನಿನಿಂದ ಮತ್ತು ನೀರಿನಿಂದ ಕೈತೊಳೆಯುತ್ತಿದ್ದೇವೆ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಬರುತ್ತಿದ್ದೇವೆ.
ನಮ್ಮ ದೇಶೀಯ ವೈದ್ಯಕೀಯ ಪದ್ಧತಿಯ ಬಗ್ಗೆ ಗಮನಹರಿಸಿದಾಗ, ಅದರಲ್ಲಿ ಸಮತೋಲನವುಳ್ಳ ಜೀವನಶೈಲಿ, ಮಧ್ಯಮ ರೀತಿಯಲ್ಲಿ ತಿನ್ನುವುದು ಮತ್ತು ಋತುಗಳಿಗೆ, ಸ್ಥಳಗಳಿಗೆ ಅನುಗುಣವಾಗಿ ತಿನ್ನುವುದಕ್ಕೆ ಪ್ರಾಧಾನ್ಯತೆಯನ್ನು ನೀಡಿರುವುದನ್ನು ತಿಳಿಯಬಹುದು. ಆಯುರ್ವೇದವು. ಹಿತ ಆಹಾರ, ಮಿತ ಆಯಾಸ, ಹಿತ ಆಹಾರ ಎನ್ನುತ್ತದೆ.
ನಾವು ತಿನ್ನುವ ಆಹಾರವು ವಾತ, ಪಿತ್ತ, ಕಫಗಳೆಂಬ ಮೂರು ದೋಷಗಳನ್ನು ಮತ್ತು ಸತ್ವ, ರಜಸ್ಸು ಮತ್ತು ತಮಸ್ಸುಗಳೆಂಬ ಮೂರು ಗುಣಗಳನ್ನೂ ಸಮತೋಲನದಲ್ಲಿಡಬೇಕು,
ಆಸಕ್ತಕರವಾಗಿ, ಅಥರ್ವವೇದದಲ್ಲಿ ಕ್ರಿಮಿಗಳನ್ನು ನೋಡಲಾಗುವುದಿಲ್ಲವೆಂದೂ ಮತ್ತು ಅದನ್ನು
ಕ್ರಿಮಿ ಎಂದೂ ಕರೆಯಲಾಗಿದೆ. ವೈದ್ಯಕೀಯ ಗ್ರಂಥವಾದ ಚರಕ ಸಂಹಿತದಲ್ಲಿ ಕ್ರಿಮಿಗಳು ಆಗೋಚರವಾದವೆಂದೂ ಮತ್ತು ಅವುಗಳ ಬಣ್ಣ ಮತ್ತು ಆಕಾರವನ್ನೂ ವಿವರಿಸಿದೆ. ಅವುಗಳನ್ನು ನೋಡಲು ಅವರ ಬಳಿ ದೂರದರ್ಶಕದ ಯಂತ್ರವಿತ್ತೆ? ಅಷ್ಟು ಸವಿಸ್ತಾರವಾಗಿ ವಿವರಿಸಿದೆ. ಗೌತಮನ ನ್ಯಾಯಸಂಹಿತದಲ್ಲಿ ಮಸೂರದ ಬಗ್ಗೆ ವಿವರಣೆಯಿದೆ.
ಅನೇಕ ಭಾರತೀಯ ಪದ್ಧತಿಗಳಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ದಿಗಂಧನವನ್ನು ಬಳಸಿದ್ದಾರೆ. ಇದರಿಂದ ಸಮಸ್ಯೆಯನ್ನು ಒಂದು ನಿರ್ದಿಷ್ಟವಾದ ಸ್ಥಳಕ್ಕೇ ಸೀಮಿತವಾಗಿಸಿದರು. ಭಗವಂತನನ್ನೂ ಅವರು ಬಿಡಲಿಲ್ಲ. ಪೂರಿಯ ಜಗನ್ನಾಥನನ್ನು ಜೇಷ್ಠ ಪೂರ್ಣಮದಂದು 14 ದಿನಗಳ ಕಾಲದವರೆಗೆ ದಿಗಂಧನದಲ್ಲಿ ಇರಿಸಿರುತ್ತಾರೆ. ಭಾರತದಲ್ಲಿ ಭಗವಂತನನ್ನೂ ಮನುಷ್ಯರಂತೆಯೇ ಪರಿಗಣಿಸುತ್ತಾರೆ ಮತ್ತು ಭಗವಂತನಿಗೂ ಸ್ನಾನಮಾಡಿಸಿ ಉಣಿಸುತ್ತಾರೆ ಮತ್ತು ಭಗವಂತನೂ ವಿಶ್ರಮಿಸಿ, ಪುನರುಜ್ಜಿವಿತನಾಗುತ್ತಾನೆ.
ನವಜಾತ ಶಿಶು ಮತ್ತು ಬಾಣಂತಿಯನ್ನು 10ರಿಂದ 15 ದಿನ ಹೊರಗಿನ ಪ್ರಭಾವಗಳಿಂದ ದೂರವಿರಿಸುತ್ತಾರೆ. ಇದರ ಕಾರಣ ನವಜಾತಶಿಶು ಮತ್ತು ಬಾಣಂತಿಯ ರೋಗನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ ಮತ್ತು ಅವರಿಬ್ಬರೂ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದೇ ರೀತಿಯಾಗಿ ಕುಟುಂಬದಲ್ಲಿ ಮರಣವಾದರೂ ಪ್ರತ್ಯೇಕವಾಗಿ ಇರುತ್ತಾರೆ. ಸ್ಮರಾಣಕ್ಕೆ ಯಾರಾದರೂ ಹೋಗಿ ಬಂದರೂ ಕಡ್ಡಾಯವಾಗಿ ಸ್ನಾನಮಾಡಬೇಕು. ಇದು ಪದ್ಧತಿಯಾಗಿದ್ದರೂ ಅನೇಕ ಅಭ್ಯಾಸಗಳಲ್ಲಿ ಪ್ರಾಯೋಗಿಕವಾದ ಉಪಯುಕ್ತತೆಯಿದೆ.
ವೈರಸ್‌ನ ದಾಳಿಯಿಂದ ತತ್ತರಿಸಿ ಹೋಗಿರುವ ಈ ಸಮಯದಲ್ಲಿ ಪಾರಂಪಾರಿಕ ಗುಣಮುಖಗೊಳಿಸುವ ಪದ್ಧತಿಗಳನ್ನು ಅನುಸರಿಸುವ ಸಂಸ್ಥೆಗಳ ಸಲಹೆಯನ್ನು ಪಡೆಯಲಾಗುತ್ತಿದೆ. ಔಷಧಿಯೇ ಆಹಾರ ಎಂಬುದೇ ನಮ್ಮ ತತ್ವ, ಆಯುರ್ವೇದವು 80% ತಡೆಗಟ್ಟುವ ಮತ್ತು 20% ಚಿಕಿತ್ಸೆ ನೀಡುವ ಪದ್ಧತಿಯಾಗಿದೆ. ವಿಚಿತ್ರವಾದ ಆಹಾರ ಪದ್ಧತಿ, ನಮ್ಮದಲ್ಲದ ಆಹಾರ,
ಡಬ್ಬಿಯಲ್ಲಿ ಕೂಡಿಡಲಾಗದ ಆಹಾರ, ದಿಢೀರೆಂದು ತಿನ್ನುವ ಆಹಾರ, ಹೊರಗೆ ತಿನ್ನುವ ಆಹಾರ ಒಂದು ರೂಢಿಯಾಗಿ ಬಿಟ್ಟಿದೆ ಮತ್ತು ಜೀವನಶೈಲಿಯ ರೋಗಗಳಿಗೆ ಕಾರಣವಾಗಿದೆ. ಈಗ ಸ್ವಲ್ಪ ನಿಂತು ಆಲೋಚಿಸಿ ಪ್ರಕೃತಿಯೊಡನೆ ಸಂಯೋಜಿಸಿ ಕೊಳ್ಳುವ ಕಾಲ ಬಹುಶಃ ಬಂದಾಗಿದೆ. ಋತುಗಳಿಗೆ ಅನುಗುಣವಾದ ಆಹಾರವನ್ನು ಮತ್ತು ಸ್ಥಳೀಯವಾಗಿ ಬೆಳೆಯಲಾದ ತರಕಾರಿಗಳನ್ನು ತಿನ್ನುವುದರಿಂದ ಆರಂಭಿಸಬಹುದು. ಅವುಗಳು ಬಹಳ ಸ್ವಾದಿಷ್ಟವಾಗಿರುತ್ತವೆ. ಸ್ಥಳೀಯ ಆರ್ಥಿಕತೆಗೆ ಬೆನ್ನೆಲುಬಾಗಿರುತ್ತದೆ.
ಮಾನವರಾಗಿ ಈ ಭೂಮಿಯನ್ನು ಆಸ್ತಿಯಾಗಿ ಪಡೆದುಕೊಂಡಿದ್ದೇವೆ. ಇತರ ಜೀವಿಗಳಿಗೂ ಇದರ ಸಂಪನ್ಮೂಲಗಳ ಸಮಾನ ಹಕ್ಕಿದೆ. ನಮ್ಮ ಪ್ರಜ್ಞಾಪೂರ್ವಕವಾದ ಮತ್ತು ನೈತಿಕ ಆಯ್ಕೆಗಳು ಪರಿಸರದ ಮೇಲೆ ದೀರ್ಘಕಾಲದ ಪ್ರಭಾವವನ್ನು ಬೀರುತ್ತದೆ. ತಮ್ಮನ್ನೇ ಪೋಷಿಸುವ ಪ್ರಕೃತಿಯನು ವಿಪರೀತವಾಗಿ ಬಳಸಿ ಮಾನವ ನಾಶ ಮಾಡುತ್ತಿದ್ದಾನೆ. ಅರಣ್ಯಗಳ ನಾಶ ಕುಡಿಯುವ ನೀರಿನ ಅತೀ ವೇಗವಾದ ಬತ್ತಿಹೋಗುವಿಕೆ ನಮಗೆಲ್ಲರಿಗೂ ಎಚ್ಚರಿಕೆಯ ಕರೆಯಾಗಿದೆ.

Comments
Post a Comment