ಮಾತಿಗಿಂತ ಮೌನ ಶಕ್ತಿಯುತ
ಚಂದ್ರನಗರದ ಅರಸ ಚಂದ್ರಸೇನನ ಏಕೈಕ ಪುತ್ರಿ ಸುಮತಿ ಸುಂದರಿ ಹಾಗೆ ಬುದ್ಧಿವಂತಳೂ.... ಆಗಿದ್ದಳು. ತನ್ನ ರೂಪ ಹಾಗೂ ಬುದ್ದಿವಂತಿಕೆಯ ಬಗ್ಗೆ ಬಂದ ಮೇಲೆ ಅರಸ ಅವಳ ವಿವಾಹ ಮಾಡಲು ಬಯಸಿದ. ಆದರೆ ರಾಜಕುಮಾರಿ, 'ಅಪ್ಪಾ ನನಗಿಂತ ಬುದ್ಧಿವಂತನಾಗಿರುವ ಯುವಕನ ಜತೆ ಮಾತ್ರ ನಾನು ಮದುವೆಯಾಗುವೆ' ಎಂದು ಹೇಳಿದಳು.
ಅಂತಹ ಯುವಕನನ್ನು ಹುಡುಕುವುದು ಹೇಗೆ. ಎಂದು ಅರಸನಿಗೆ ಚಿಂತೆಯಾಯಿತು. ಅದನ್ನು" ನನಗೆ ಬಿಡಿ "ಎಂದು ಹೇಳಿದ ಸುಮತಿ ಆಳುಗಳ ಸಹಾಯದಿಂದ ಅರಮನೆಯ ಒಂದು ದೊಡ್ಡ ಮರಕ್ಕೆ ತೂಗುವ ಮಂಚವನ್ನು ಕಟ್ಟಿಸಿದಳು. ಮರುದಿನ ಮುಂಜಾನೆ ಆರಸ, ಮಗಳ ಆದೇಶ ದಂತೆ ತನ್ನ ರಾಜ್ಯದಲ್ಲಿ ಡಂಗೂರ ಸಾರಿಸಿದ."ಯಾರು ರಾಜಕುಮಾರಿ ಹಾಕಿದ ಷರತ್ತನ್ನು ಗೆಲ್ಲುವರೋ" ಅವರು ರಾಜಕುಮಾರಿಯನ್ನು ವಿವಾಹವಾಗಬಹುದು. ಎಂದು ರಾಜಕುಮಾರಿಯ ರೂಪ ಹಾಗೂ ಬುದ್ದಿ ಹಾಗೂ ಖ್ಯಾತಿ ದೂರದ ವರೆಗೂ ಹಬ್ಬಿತ್ತು
ಹೀಗಾಗಿ ರಾಜಕುಮಾರಿಯನ್ನು ವರಿಸುವುದಕ್ಕಾಗಿ ದೂರದ ಊರುಗಳಿಂದ ರಾಜಕುಮಾರರು ಚಂದ್ರ ನಗರಕ್ಕೆ ಬಂದರು.
ರಾಜಕುಮಾರಿ ಮರಕ್ಕೆ ಕಟ್ಟಿದ ತೂಗುಮಂಚದಿಂದ ನನ್ನನ್ನು ಮುಟ್ಟದೆ ಯಾರು ಕೆಳಗೆ ಇಳಿಸುವರೋ ಆ ಯುವಕನನ್ನು ನಾನು ಮದುವೆಯಾಗುವುದಾಗಿ ಷರತ್ತು ಹೊರಡಿಸಿದಳು. ತಾನು ಬಂದ ರಾಜಕುಮಾರರೆಲ್ಲ ನಾನಾ ರೀತಿಯಿಂದ ಪ್ರಯತ್ನಿಸಿದರೂ ಅವಳನ್ನು ತೂಗುಮಂಚದಿಂದ ಕೆಳಗಿಳಿಸಲು ಸಾಧ್ಯವಾಗಲಿಲ್ಲ. ಅವರೆಲ್ಲಾ ನಿರಾಶರಾಗಿ ಹೊರಟುಹೋದರು. ದಿನಗಳು ಕಳೆದುಹೋದವು . ಅರಸನಿಗೆ ಚಿಂತೆಯಾಯಿತು.ಮಾರನೇ ದಿನ ರಾಜಕುಮಾರಿಯ ಮದುವೆಯ ವಿಷಯ ಕೇಳಿ ಕುರಿಕಾಯುವ ವೇಷದಲ್ಲಿ ರಾಜಕುಮಾರನೊಬ್ಬ ಚಂದ್ರನಗರಕ್ಕೆ ಬಂದ. ಅವನ ಜತೆಯಲ್ಲಿ ಒಂದು ಕುರಿ ಹಾಗೂ ಒಂದು ನಾಯಿ ಇದ್ದವು. ಅವನು ಕುರಿ ಹಾಗೂ
ನಾಯಿಯನ್ನು ರಾಜಕುಮಾರಿ ಕುಳಿತ ಮರದ ಬಳಿಯಲ್ಲಿಯೇ ಇದ್ದ ಇನ್ನೊಂದು ಚಿಕ್ಕ ಮರಕ್ಕೆ ಸ್ವಲ್ಪ ಅಂತರದಲ್ಲಿ ಕಟ್ಟಿದ, ಆಮೇಲೆ ತನ್ನ ಜೋಳಿಗೆಯಿಂದ ಸ್ವಲ್ಪ ಮಾಂಸವನ್ನು ತೆಗೆದು ಕುರಿಯ ಮುಂದೆ ಹಾಕಿದನು. ಆಮೇಲೆ ಸ್ವಲ್ಪ ಹುಲ್ಲನ್ನು ತೆಗೆದು ನಾಯಿಯ ಮುಂದೆ ಹಾಕಿದನು. ರಾಜಕುಮಾರಿ ತುಂಬ ಕುತೂಹಲದಿಂದ ಅದನ್ನು ನೋಡುತ್ತಿದ್ದಳು. ರಾಜಕುಮಾರಿಗೆ ಅವನ ಮೂರ್ಖತನವನ್ನು ಕಂಡು ನಗೆ ಬಂತು.
ಅವಳು, 'ಎಲ್ಲೋ ಮೂರ್ಖ, ಕುರಿ ಮಾಂಸವನ್ನು, ತಿನ್ನುತ್ತವೆಯೇ' ಎಂದು ಕೇಳಿದಳು. ಆದರೆ, ಈ ವೇಷಧಾರಿ ರಾಜಕುಮಾರ ಅವಳು ಹೇಳಿದ್ದನ್ನು ಕೇಳಿಸಿ ಕೊಂಡಿಲ್ಲ ಎಂಬಂತೆ ವರ್ತಿಸಿದನು . ಆಗ ರಾಜಕುಮಾರಿ ಇನಷ್ಟು ಜೋರಾಗಿ ಕೂಗಿದರೂ ಅವನು ತಿರುಗಿ ನೋಡಲಿಲ್ಲ. ರಾಜಕುಮಾರಿಗೆ ಇನ್ನಷ್ಟು ಕೋಪ ಬಂತು. ನಿನಗೇನು ಕಿವುಡೇ? ನಾನು ಹೇಳುತ್ತಿರುವುದು ನಿನಗೆ ಕೇಳಿಸುತ್ತಿಲ್ಲವೇ? ಎಂದಳು. ಆಗಲೂ ಅವನು ಮೌನವಾಗಿಯೇ ಇದ್ದನು. ಆಗ ರಾಜಕುಮಾರಿಗೆ ಕೋಪ ತಡೆದು ಕೊಳ್ಳಲಾಗಲಿಲ್ಲ. ಅವಳು ತೂಗುಮಂಚದಿಂದ ಕೆಳಗಿಳಿದು ಅವನ ಬಳಿಗೆ ಬಂದು ನಾನು ಅಷ್ಟೊತ್ತಿನಿಂದ ಕಿರುಚುತ್ತಿದ್ದೇನೆ. ನಿನಗೆ ಕೇಳಿಸುತ್ತಿಲ್ಲವೇ?' ಎಂದು ಜೋರಾಗಿ ಹೇಳಿದಳು. ಆಗ ಅವನು ಮುಗುಳ್ಳಗುತ್ತ
'ಕೇಳಿಸುತ್ತಿದೆ' ಎಂದ.
ರಾಜಕುಮಾರಿಗೆ ಏನೂ ತೋಚದಾಯಿತು. ಅವಳಿಗೆ ತನ್ನ ತಪ್ಪಿನ ಅರಿವಾಯ್ತು. ಮುಟ್ಟದೆ ಕುರಿ ಕಾಯುವ ವೇಷದಲ್ಲಿದ್ದ ರಾಜಕುಮಾರ ತೂಗು ಮಂಚದಿಂದ ಕೆಳಗೆ ಇಳಿಸಿದ್ದನು. ತನ್ನ ಷರತ್ತಿನಂತೆ ರಾಜಕುಮಾರಿ ಅವನ ಕೊರಳಿಗೆ ಮಾಲೆ ಹಾಕಬೇಕಾಯಿತು.
ಅನೇಕ ಬಾರಿ ನಾವು ನಮ್ಮ ಬುದ್ದಿವಂತಿಕೆಯನ್ನು ಮಾತುಗಳಲ್ಲಿ ಪ್ರದರ್ಶಿಸುವ ಪ್ರಯತ್ನ ಮಾಡುತ್ತಿರುತ್ತೇವೆ. ಆದರೆ, ಎಲ್ಲಾ ಕಡೆಯೂ ಮಾತಿನಿಂದ ಗೆಲ್ಲಲು ಸಾಧ್ಯವಿಲ್ಲ, ಕೆಲವೊಮ್ಮೆ ಮೌನವಾಗಿರುವುದು ಕೂಡ ಬುದ್ಧಿವಂತಿಕೆ ಆನಿಸಿಕೊಳ್ಳುತ್ತದೆ. ಎಲ್ಲರಿಗಿಂತ ನಮಗೇ ಹೆಚ್ಚು ತಿಳಿದಿದೆ ಎನ್ನುವ ಅಹಂಕಾರವೂ ಕೂಡ ಒಂದಲ್ಲ ಒಂದು ದಿನ ನಮ್ಮ ಸೋಲಿಗೆ ಕಾರಣವಾಗುತ್ತದೆ. ಎಲ್ಲಾ ಸಂದರ್ಭಗಳಲ್ಲಿ ನಾವು ಮಾತನಾಡಿ, ವಾದವನ್ನು ಗೆಲ್ಲುವ ಅವಶ್ಯಕತೆಯಿರುವುದಿಲ್ಲ, ಮೌನದಿಂದಿದ್ದು ಆ ಸಂದರ್ಭವನ್ನು ನಮಗೆ ಅನುಕೂಲಕರವಾಗಿ ತಿರುಗಿಸಿಕೊಳ್ಳಬಹುದು. ಯಾವ ಸಂದರ್ಭದಲ್ಲಿ ಮಾತನಾಡಬೇಕು, ಯಾವಾಗ ಮೌನದಿಂದ ಇರಬೇಕು ಎನ್ನುವ ಸೂಕ್ಷ್ಮ ಪ್ರಜ್ಞೆ ನಮಗಿದ್ದರೆ ಆಯಿತು. ಮಾತನಾಡಬಲ್ಲವರು ಅಗತ್ಯವಿದ್ದಾಗ ಮೌನವಾಗಿರಬಲ್ಲವರು ಜಾಣರಾದರೆ ಅಗತ್ಯವಿದ್ದಾಗ ಮೌನರಾಗಿರಬಲ್ಲರು. ಎಂಥ ಪರಿಸ್ಥಿತಿಯನ್ನೂ ನಿಭಾಯಿಸುವ ಜಾಣ್ಮೆ ಬೆಳೆಸಿಕೊಂಡಿರುತ್ತಾರೆ.
Comments
Post a Comment