ವೃದ್ಧೆಯ ಜಾಣತನ ನ್ಯಾಯ, ನೀತಿ, ದಾನ, ಧರ್ಮಗಳನ್ನು ತಿಳಿದು ಪಾಲಿಸುತ್ತಿದ್ದ ಒಬ್ಬ ಮಹಾರಾಜನಿದ್ದನು. ಒಂದು ಸಲ ಒಂದು ದೊಡ್ಡ ಪ್ರದರ್ಶನವನ್ನು ಏರ್ಪಾಟು ಮಾಡಿದ.ಆ ಪ್ರದರ್ಶನದಲ್ಲಿ ಹಲವಾರು ವಸ್ತುಗಳು ಇದ್ದವು. ಬೆಲೆಬಾಳುವ ಬಟ್ಟೆಗಳು ಅಪರೂಪದ ಒಡವೆ,ವಸ್ತುಗಳು ಇದ್ದವು. ಪ್ರದರ್ಶನದಲ್ಲಿಟ್ಟ ವಸ್ತುಗಳನ್ನು ನೋಡಲು ಬಂದವರು, ತಮಗೆ ಯಾವ ವಸ್ತು ಬೇಕೋ ಅದನ್ನು ತೆಗೆದುಕೊಂಡು ಹೋಗಬಹುದಿತ್ತು. ಇದರಿಂದ ಸುತ್ತಮುತ್ತಲ ಹಳ್ಳಿ, ಪಟ್ಟಣ ಹಾಗೂ ನಗರದ ಜನರು ಬಂದರು. ಪ್ರದರ್ಶನ ನೋಡಲು ಬಂದವರೆಲ್ಲ ನೋಡು ನೋಡುತ್ತಾ ತಮಗೆ ಬೇಕಾದ ಬೆಲೆಬಾಳುವ ಬಟ್ಟೆಗಳನ್ನು, ಇನ್ನು ಕೆಲವರು ಒಡವೆಗಳನ್ನು, ಮತ್ತೆ ಕೆಲವರು ಅದ್ಭುತವಾದ ಪುಸ್ತಕಗಳನ್ನು, ಇನ್ನಷ್ಟು ಜನ ಹಣ್ಣುಹಂಪಲುಗಳನ್ನು, ಹೇಗೆ ತಮಗೆ ಬೇಕು ಬೇಕಾದಂತಹ ವಸ್ತುಗಳನ್ನು ತೆಗೆದುಕೊಂಡು ಹೋದರು ಅಲ್ಲಿಗೆ ಬಂದವರೆಲ್ಲಾ ತಮಗೆ ಏನು ಬೇಕೋ ಅದನ್ನು ತೆಗೆದುಕೊಂಡು ಹೋದರು. ಆದರೆ ಅಲ್ಲಿಗೆ ಬಂದವರಲ್ಲಿ , ವೃದ್ಧಳಾದ ಮಹಿಳೆಯೂಬ್ಬಳು ಅಲ್ಲಿರುವ ಯಾವ ವಸ್ತುವನ್ನು ಮುಟ್ಟಲಿಲ್ಲ. ಅವಳಿಗೆ ಯಾವುದೂ ತೃಪ್ತಿ ಕಂಡಂತೆ ಅನಿಸಲಿಲ್ಲ. ಇದನ್ನೇ ಗಮನಿಸುತ್ತಿದ್ದ ದಿವಾನನು, ರಾಜನ್, "ಈ ಪಟ್ಟಣದ ಜನರೆಲ್ಲರೂ ಈ ಪ್ರದರ್ಶನವನ್ನು ನೋಡಿ ಆನಂದಿಸಿ ಅದರಲ್ಲಿನ ಎಲ್ಲಾ ವಸ್ತುಗಳನ್ನು ನೋಡಿ ಕಣ್ತುಂಬಿಕೊಂಡು ತಮಗೆ ಬೇಕ...
ಅಪರೂಪದ ಕಾಯಿಲೆಗಳು ನೆಗಡಿ, ಕೆಮ್ಮು, ಜ್ವರ, ತಲೆನೋವುಗಳಂಥ ಸಾಮಾನ್ಯ ಕಾಯಿಲೆಗಳಿಲ್ಲ. ಮಧುಮೇಹ, ಹೃದ್ರೋಗ, ರಕ್ತದೊತ್ತಡ, ಕ್ಯಾನ್ಸರ್‌ಗಳಂಥ ರೋಗಗಳೂ ಅಲ್ಲ. ಅವು ಎಷ್ಟು ಅಪರೂಪ ಎಂದರೆ ಆ ಕಾಯಿಲೆಗಳ ಹೆಸರನ್ನೇ ನಾವು ಕೇಳಿರುವುದಿಲ್ಲ. ಅಷ್ಟೇ ಏಕೆ ಅವು ಬಹುತೇಕ ವೈದ್ಯರಿಗೂ ಅಪರಿಚಿತ, ತಮಗೇ ಗೊತ್ತಿರದ ಕಾಯಿಲೆಗೆ ಅದು ಹೇಗೆ ಚಿಕಿತ್ಸೆ ಕೊಟ್ಟಾರು?! ಎಲ್ಲೋ ಕೆಲವು ವೈದ್ಯರಿಗೆ ಇಂಥ ಕೆಲವು ಕಾಯಿಲೆಗಳ ಬಗ್ಗೆ ಗೊತ್ತಿರುತ್ತದೆ. ಆದರೂ ಅವುಗಳ ಚಿಕಿತ್ಸೆಗೆ ಔಷರಿಗಳು ಲಭ್ಯ ಇರುವುದಿಲ್ಲ. ಉಪಚಾರ ಇಲ್ಲದ, ಔಷಧಿಗಳಿಲ್ಲದ ಈ ಕಾಯಿಲೆಗಳು ತೀರ ಆನಾಥವೂ ಕೂಡ! ಯಾವಾಗಲೋ ಒಮ್ಮೆ ಬರುವ ಇಂಥ ರೋಗಿಗಳ ಬಗ್ಗೆ ವೈದರೂ ತಲೆಕೆಡಿಸಿಕೊಳ್ಳುವುದಿಲ್ಲ. ಈ ಕಾಯಿಲೆಗಳಿಗೆ ನೀಡುವ ಔಷಧಿಗಳನ್ನು ಉತ್ಪಾದಿಸಲು ಔಷಧ ಉತ್ಪಾದಕರೂ ಮುಂದೆ ಬರುವುದಿಲ್ಲ. ಹಲವು ಉತ್ಪಾದಕರು ಉತ್ಪಾದನೆಗೆ ಮುಂದಾದರೂ ಅವುಗಳ ಬೆಲೆ ತೀರಾ ಹೆಚ್ಚು. ಅವು ಸಾಮಾನ್ಯ ಜನರ ಕೈಗೆ ಎಟಕುವುದಿಲ್ಲ. ಹೆಚ್ಚಾಗಿ ಮಕ್ಕಳನ್ನೇ ಪೀಡಿಸುವ ಈ ಕಾಯಿಲೆಗಳು ಅವರನ್ನು ಎಳೆ ವಯಸ್ಸಿನಲ್ಲಿಯೇ ಅರ್ಜರಿತರನ್ನಾಗಿಸುತ್ತವೆ. ಸರಿಸುಮಾರು ಹತ್ತು ಕಿಲೋ ಭಾರದ ಒಂದು ಮಗುವಿಗೆ. ಪ್ರತಿವರ್ಷ ಎಷ್ಟೋ ಲಕ್ಷದಿಂದ ನಿಂದ ಒಂದು ಕೋಟಿಗೂ ಹೆಚ್ಚು ಹಣವನ್ನು ಚಿಕಿತ್ಸೆಗಾಗಿ ತೆರಬೇಕಾಗುತ್ತದೆ. ಸರಕಾರ, ಸ್ವಯಂಸೇವಾ ಸಂಸ್ಥೆ...